ಏಕಾತ್ಮತಾ ಸ್ತೋತ್ರ
ಓಂ ಸಚ್ಚಿದಾನಂದರೂಪಾಯ ನಮೋಸ್ತು ಪರಮಾತ್ಮನೇ |
ಜ್ಯೋತಿರ್ಮಯಸ್ವರೂಪಾಯ ವಿಶ್ವಮಾಂಗಲ್ಯಮೂರ್ತಯೇ ||೧||
ಪ್ರಕೃತಿಃ ಪಂಚಭೂತಾನಿ ಗ್ರಹಾ ಲೋಕಾಃ ಸ್ವರಾಸ್ತಥಾ |
ದಿಶಃ ಕಾಲಶ್ಚಸರ್ವೇಷಾಂ ಸದಾ ಕುರ್ವಂತು ಮಂಗಲಮ್ ||೨||
ರತ್ನಾಕರಧೌತಪದಾಂ ಹಿಮಾಲಯ ಕಿರೀಟಿನೀಮ್ |
ಬ್ರಹ್ಮರಾಜರ್ಷಿರತ್ನಾಢ್ಯಾಂ ವಂದೇ ಭಾರತಮಾತರಮ್ ||೩||
ಮಹೇಂದ್ರೋ ಮಲಯಃ ಸಹ್ಯೋ ದೇವತಾತ್ಮಾ ಹಿಮಾಲಯಃ |
ಧ್ಯೇಯೋ ರೈವತಕೋ ವಿಂಧ್ಯೋ ಗಿರಿಶ್ಚಾರಾವಲಿಸ್ತಥಾ ||೪||
ಗಂಗಾ ಸರಸ್ವತೀ ಸಿಂಧುರ್ ಬ್ರಹ್ಮಪುತ್ರಶ್ಚ ಗಂಡಕೀ |
ಕಾವೇರೀ ಯಮುನಾ ರೇವಾ ಕೃಷ್ಣಾ ಗೋದಾ ಮಹಾನದೀ ||೫||
ಅಯೋಧ್ಯಾ ಮಥುರಾ ಮಾಯಾ ಕಾಶೀ ಕಾಂಚಿ ಅವಂತಿಕಾ |
ವೈಶಾಲೀ ದ್ವಾರಿಕಾ ಧ್ಯೇಯಾ ಪುರೀ ತಕ್ಷಶಿಲಾ ಗಯಾ ||೬||
ಪ್ರಯಾಗಃ ಪಾಟಲೀಪುತ್ರಂ ವಿಜಯಾನಗರಂ ಮಹತ್ |
ಇಂದ್ರಪ್ರಸ್ಥಂ ಸೋಮನಾಥಃ ತಥಾಽಮೃತಸರಃ ಪ್ರಿಯಮ್ ||೭||
ಚತುರ್ವೇದಾಃ ಪುರಾಣಾನಿ ಸರ್ವೋಪನಿಷದಸ್ತಥಾ |
ರಾಮಾಯಣಂ ಭಾರತಂ ಚ ಗೀತಾ ಸದ್ದರ್ಶನಾನಿ ಚ ||೮||
ಜೈನಾಗಮಾಸ್ತ್ರಿಪಿಟಕಾ ಗುರುಗ್ರಂಥಃ ಸತಾಂ ಗಿರಃ |
ಏಷ ಜ್ಞಾನನಿಧಿಃ ಶ್ರೇಷ್ಠಃ ಶ್ರದ್ಧೇಯೋ ಹೃದಿ ಸರ್ವದಾ ||೯||
ಅರುಂಧತ್ಯನಸೂಯಾ ಚ ಸಾವಿತ್ರೀ ಜಾನಕೀ ಸತೀ |
ದ್ರೌಪದೀ ಕಣ್ಣಗೀ ಗಾರ್ಗೀ ಮೀರಾ ದುರ್ಗಾವತೀ ತಥಾ ||೧೦||
ಲಕ್ಷ್ಮೀರಹಲ್ಯಾ ಚನ್ನಮ್ಮಾ ರುದ್ರಮಾಂಬಾ ಸುವಿಕ್ರಮಾ |
ನಿವೇದಿತಾ ಸಾರದಾ ಚ ಪ್ರಣಮ್ಯಾ ಮಾತೃದೇವತಾಃ ||೧೧||
ಶ್ರೀರಾಮೋ ಭರತಃ ಕೃಷ್ಣೋ ಭೀಷ್ಮೋ ಧರ್ಮಸ್ತಥಾರ್ಜುನಃ |
ಮಾರ್ಕಂಡೇಯೋ ಹರಿಶ್ಚಂದ್ರಃ ಪ್ರಹ್ಲಾದೋ ನಾರದೋ ಧ್ರುವಃ ||೧೨||
ಹನುಮಾಞ್ಜನಕೋ ವ್ಯಾಸೋ ವಸಿಷ್ಠಶ್ಚ ಶುಕೋ ಬಲಿಃ |
ಧಧೀಚಿವಿಶ್ವಕರ್ಮಾಣೌ ಪೃಥುವಾಲ್ಮೀಕಿಭಾರ್ಗವಾಃ ||೧೩||
ಭಗೀರಥಶ್ಚೈಕಲವ್ಯೋ ಮನುರ್ಧನ್ವಂತರಿಸ್ತಥಾ |
ಶಿಬಿಸ್ಚರಂತಿದೇವಶ್ಚ ಪುರಾಣೋದ್ಗೀತಕೀರ್ತಯಃ ||೧೪||
ಬುದ್ಧಾ ಜಿನೇಂದ್ರಾ ಗೋರಕ್ಷಃ ಪಾಣಿನಿಶ್ಚ ಪತಂಜಲಿಃ |
ಶಂಕರೋ ಮಧ್ವನಿಂಬಾರ್ಕೌ ಶ್ರೀರಾಮಾನುಜವಲ್ಲಭೌ ||೧೫||
ಝೂಲೇಲಾಲೋಽಥ ಚೈತನ್ಯಃ ತಿರುವಲ್ಲುವರಸ್ತಥಾ |
ನಾಯನ್ಮಾರಾಲವಾರಾಶ್ಚ ಕಂಬಶ್ಚ ಬಸವೇಶ್ವರಃ ||೧೬||
ದೇವಲೋ ರವಿದಾಸಶ್ಚ ಕಬೀರೋ ಗುರುನಾನಕಃ
ನರಸಿಸ್ತುಲಸೀದಾಸೋ ದಶಮೇಶೋ ದೃಢವ್ರತಃ ||೧೭||
ಶ್ರೀಮತ್ ಶಂಕರದೇವಶ್ಚ ಬಂಧೂ ಸಾಯಣಮಾಧವೌ |
ಜ್ಞಾನೇಶ್ಚರಸ್ತುಕಾರಾಮೋ ರಾಮದಾಸಃ ಪುರಂದರಃ ||೧೮||
ಬಿರಸಾ ಸಹಜಾನಂದೋ ರಾಮಾನಂದಾಸ್ತಥಾ ಮಹಾನ್ |
ವಿತರಂತು ಸದೈವೈತೇ ದೈವೀಂ ಸದ್ಗುಣಸಂಪದಮ್ ||೧೯||
ಭರತರ್ಷಿಃ ಕಾಲಿದಾಸಃ ಶ್ರೀಭೋಜೋ ಜಕಣಸ್ತಥಾ |
ಸೂರದಾಸಸ್ತ್ಯಾಗರಾಜೋ ರಸಖಾನಶ್ಚಸಕವಿಃ ||೨೦||
ರವಿವರ್ಮಾ ಭಾತಖಂಡೇ ಭಾಗ್ಯಚಂದ್ರಃ ಭೂಪತಿಃ |
ಕಲಾವಂತಶ್ಚವಿಖ್ಯಾತಾಃ ಸ್ಮರಣೀಯಾ ನಿರಂತರಮ್ ||೨೧||
ಅಗಸ್ತ್ಯಃ ಕಂಬುಕೌಂಡಿನ್ಯೌ ರಾಜೇಂದ್ರಶ್ಚೋಲವಂಶಜಃ |
ಅಶೋಕಃ ಪುಷ್ಯಮಿತ್ರಶ್ಚ ಖಾರವೇಲಃ ಸುನೀತಿಮಾನ್ ||೨೨||
ಚಾಣಕ್ಯ ಚಂದ್ರಗುಪ್ತೌಚ ವಿಕ್ರಮಃ ಶಾಲಿವಾಹನಃ |
ಸಮುದ್ರಗುಪ್ತಃ ಶ್ರೀಹರ್ಷಃ ಶೈಲೇಂದ್ರೋ ಬಪ್ಪರಾವಲಃ ||೨೩||
ಲಾಚಿದ್ ಭಾಸ್ಕರವರ್ಮಾ ಚ ಯಶೋಧರ್ಮಾ ಚ ಹೂಣಜಿತ್ |
ಶ್ರೀಕೃಷ್ಣದೇವರಾಯಶ್ಚ ಲಲಿತಾದಿತ್ಯ ಉದ್ಭಲಃ ||೨೪||
ಮುಸುನೂರಿನಾಯಕೌ ತೌ ಪ್ರತಾಪಃ ಶಿವಭೂಪತಿಃ |
ರಣಜಿತ್‍ಸಿಂಹ ಇತ್ಯೇತೇ ವೀರಾ ವಿಖ್ಯಾತವಿಕ್ರಮಾಃ ||೨೫||
ವೈಜ್ಞಾನಿಕಾಶ್ಚಕಪಿಲಃ ಕಣಾದಃ ಸುಶ್ರುತಸ್ತಥಾ |
ಚರಕೋ ಭಾಸ್ಕರಾಚಾರ್ಯೋ ವರಾಹಮಿಹಿರಃ ಸುಧೀ ||೨೬||
ನಾಗಾರ್ಜುನೋ ಭರದ್ವಾಜ ಆರ್ಯಭಟ್ಟೋ ಬಸುರ್ಬುಧಃ |
ಧ್ಯೇಯೋ ವೇಂಕಟರಾಮಶ್ಚ ವಿಜ್ಞಾರಾಮಾನುಜಾದಯಃ ||೨೭||
ರಾಮಕೃಷ್ಣೋ ದಯಾನಂದೋ ರವೀಂದ್ರೋ ರಾಮಮೋಹನಃ |
ರಾಮತೀರ್ಥೋಽರವಿಂದಶ್ಚ ವಿವೇಕಾನಂದ ಉದ್ಯಶಾಃ ||೨೮||
ದಾದಾಭಾಯಿ ಗೋಪಬಂಧುಃ ತಿಲಕೋ ಗಾಂಧಿರಾದೃತಾಃ |
ರಮಣೋ ಮಾಲವೀಯಶ್ಚಶ್ರೀ ಸುಬ್ರಹ್ಮಣ್ಯಭಾರತೀ ||೨೯||
ಸುಭಾಷಃ ಪ್ರಣವಾನಂದಃ ಕ್ರಾಂತಿವೀರೋ ವಿನಾಯಕಃ |
ಠಕ್ಕರೋ ಭೀಮರಾವಶ್ಚ ಪುಲೇ ನಾರಾಯಣೋ ಗುರುಃ ||೩೦||
ಅನುಕ್ತಾ ಯೇ ಭಕ್ತಾಃ ಪ್ರಭುಚರಣಸಂಸಕ್ತಹೃದಯಾಃ |
ಅನಿರ್ಧಿಷ್ಠಾ ವೀರಾ ಅಧಿಸಮರಮುದ್ಧ್ವಸ್ತರಿಪವಃ |
ಸಮಾಜೋದ್ಧರ್ತಾರಃ ಸುಹಿತಕರವಿಜ್ಞಾನನಿಪುಣಾಃ |
ನಮಸ್ತೇಭ್ಯೋ ಭೂಯಾತ್ ಸಕಲಸುಜನೇಭ್ಯಃ ಪ್ರತಿದಿನಮ್ ||೩೨||
ಇದಮೇಕಾತ್ಮತಾಸ್ತೋತ್ರಂ ಶ್ರದ್ಧಯಾ ಯಃ ಸದಾ ಪಠೇತ್ |
ಸರಾಷ್ಟ್ರ ಧರ್ಮನಿಷ್ಠಾವಾನ್ ಅಖಂಡಂ ಭಾರತಂ ಸ್ಮರೇತ್ ||೩೩||
ಭಾರತಮಾತಾ ಕೀ ಜಯ್
ಅರ್ಥ:
ಮಂಗಲಾಚರಣ (೧-೨)
ಜ್ಯೋತಿರ್ಮಯ ಸ್ವರೂಪಿಯಾದ, ವಿಶ್ವಮಾಂಗಲ್ಯ ಮೂರ್ತಿಯಾದ ಸತ್-ಚಿತ್-ಆನಂದರೂಪಿಯಾದ ಪರಮಾತ್ಮನಿಗೆ ನಮಸ್ಕಾರಗಳು.ಸತ್ವ, ರಜ ಮತ್ತು ತಮ ಈ ಮೂರು ಗುಣಗಳಿಂದ ಕೂಡಿದ ಪ್ರಕೃತಿಯೂ, ಪೃಥಿವೀ-ನೀರು-ತೇಜಸ್ಸು-ವಾಯು-ಆಕಾಶ ಎಂಬ ಪಂಚಭೂತಗಳೂ, ಸೂರ್ಯ-ಚಂದ್ರ-ಮಂಗಳ-ಬುಧ-ಗುರು-ಶುಕ್ರ-ಶನಿ-ರಾಹು-ಕೇತುಗಳೆಂಬ ನವಗ್ರಹಗಳೂ, ಭೂಲೋಕ-ಭುವರ್ಲೋಕ-ಸ್ವರ್ಲೋಕ-ಮಹರ್ಲೋಕ-ಜನೋಲೋಕ-ತಪೋಲೋಕ-ಸತ್ಯಲೋಕ-ಅತಲ-ವಿತಲ-ಸುತಲ-ತಲಾತಲ-ರಸಾತಲ-ಮಹಾತಲ-ಪಾತಾಲ-ಈ ಹದಿನಾಲ್ಕು ಲೋಕಗಳೂ, ಷಡ್ಜ-ಋಷಭ-ಗಾಂಧಾರ-ಮಧ್ಯಮ-ಪಂಚಮ-ದೈವತ-ನಿಷಾದ ಈ ಏಳು ಶುದ್ಧ ಸ್ವರಗಳೂ, ಮತ್ತು ಕೋಮಲ ಋಷಭ-ಕೋಮಲ ಗಾಂಧಾರ-ತೀವ್ರ ಮಧ್ಯಮ-ಕೋಮಲ ದೈವತ-ಕೋಮಲ ನಿಷಾದ ಈ ಐದು ವಿಕೃತ ಸ್ವರಗಳೂ, ಪೂರ್ವ-ದಕ್ಷಿಣ-ಪಶ್ಚಿಮ-ಉತ್ತರ-ಈಶಾನ್ಯ-ಆಗ್ನೇಯ-ನೈಋತ್ಯ-ವಾಯುವ್ಯ-ಊರ್ಧ್ವ-ಅಧಃ ಈ ಹತ್ತು ದಿಕ್ಕುಗಳೂ ಹಾಗೂ ಭೂತ-ವರ್ತಮಾನ ಮತ್ತು ಭವಿಷ್ಯ ಈ ಮೂರು ಕಾಲಗಳೂ ಎಲ್ಲರಿಗೂ ಸದಾ ಮಂಗಳವನ್ನುಂಟುಮಾಡಲಿ.
ಭಾರತಮಾತೆಗೆ ನಮನ (೩)
ಸಮುದ್ರರಾಜನಿಂದ ಪಾದ ತೊಳೆಸಿಕೊಂಡು, ಹಿಮಾಲಯವೆಂಬ ಕಿರೀಟವನ್ನು ಧರಿಸಿಕೊಂಡು, ಉತ್ತಮೋತ್ತಮರಾದ ಅಸಂಖ್ಯ ಬ್ರಹ್ಮರ್ಷಿ, ರಾಜರ್ಷಿ ರತ್ನಗಳಿಂದ ಅಲಂಕೃತಳಾಗಿರುವ ಭಾರತಮಾತೆಗೆ ನಮಸ್ಕಾರಗಳು.
ಮುಖ್ಯ ಪರ್ವತಗಳು (೪)
ಮಹೇಂದ್ರ, ಮಲಯ, ಸಹ್ಯಾದ್ರಿ, ದೇವತೆಗಳ ಆತ್ಮದಂತೆ ಇರುವ ಹಿಮಾಲಯ, ರೈವತಕ, ವಿಂಧ್ಯ ಮತ್ತು ಆರಾವಳಿ ಪರ್ವತಗಳು ಸ್ಮರಣೀಯವಾದವುಗಳು.
ಪವಿತ್ರ ನದಿಗಳು (೫)
ಗಂಗಾ, ಸರಸ್ವತಿ, ಸಿಂಧು, ಬ್ರಹ್ಮಪುತ್ರ, ಗಂಡಕಿ, ಕಾವೇರಿ, ಯಮುನಾ, ನರ್ಮದಾ (ರೇವಾ), ಕೃಷ್ಣಾ, ಗೋದಾ ಮತ್ತು ಮಹಾನದಿಗಳು ಸ್ಮರಣೀಯವಾದವುಗಳು.
ಪ್ರಖ್ಯಾತ ಪುಣ್ಯ ನಗರಗಳು (೬-೭)
ಅಯೋಧ್ಯೆ, ಮಥುರೆ, ಹರಿದ್ವಾರ (ಮಾಯಾ), ಕಾಶಿ, ಕಾಂಚಿ, ಉಜ್ಜಯಿನಿ (ಆವಂತಿಕಾ), ವೈಶಾಲಿ, ದ್ವಾರಿಕಾ, ಪುರಿ, ತಕ್ಷಶಿಲಾ ಮತ್ತು ಗಯಾ ಈ ಪಟ್ಟಣಗಳು ಸ್ಮರಣೀಯವಾದವುಗಳು.ಪ್ರಯಾಗ, ಪಾಟಲೀಪುತ್ರ, ವಿಜಯನಗರ, ಇಂದ್ರಪ್ರಸ್ಥ, ಸೋಮನಾಥ ಈ ಸ್ಥಳಗಳು ಹಾಗೂ ಅಮೃತಸರವನ್ನೂ ನೆನೆಯತಕ್ಕದ್ದು.
ಪವಿತ್ರ ಗ್ರಂಥಗಳು (೮-೯)
ಋಕ್, ಯಜುಃ, ಸಾಮ, ಅಥರ್ವ ಎಂಬ ನಾಲ್ಕು ವೇದಗಳು, ಪುರಾಣಗಳು, ಎಲ್ಲ ಉಪನಿಷತ್ತುಗಳು, ರಾಮಾಯಣ, ಮಹಾಭಾರತಗಳು, ಗೀತೆ, ದರ್ಶನಗಳು;ಜೈನಾಗಮಗಳು, ತ್ರಿಪಿಟಕಗಳು, ಗುರು ಗ್ರಂಥಸಾಹೇಬ್ ಮತ್ತು ಎಲ್ಲ ಸಂತರ ವಚನಗಳು ಇವೇ ಮೊದಲಾದ ಶ್ರೇಷ್ಠ ಜ್ಞಾನನಿಧಿಗಳನ್ನು ಸದಾ ಹೃದಯದಲ್ಲಿ ನೆನೆಯತಕ್ಕದ್ದು.
ಮಾತೃ ದೇವತೆಯರು (೧೦-೧೧)
ಅರುಂಧತಿ, ಅನಸೂಯಾ, ಸಾವಿತ್ರಿ, ಸೀತೆ ಪಾರ್ವತಿ (ಸತಿ), ದ್ರೌಪದಿ, ಮಹಾಸಾಧ್ವಿ ಕಣ್ಣಗಿ, ಗಾರ್ಗಿ, ಮೀರಾ ದುರ್ಗಾವತಿ ಹಾಗೂಝಾನ್ಸಿರಾಣಿ ಲಕ್ಷ್ಮೀಬಾಯಿ, ಅಹಲ್ಯಾಬಾಯಿ ಹೋಳ್ಕರ್, ಕೆಳದಿ ಚೆನ್ನಮ್ಮಾ, ಮತ್ತು ಕಿತ್ತೂರು ಚೆನ್ನಮ್ಮರಾಣಿಯರು, ಶೂರಳಾದ ರುದ್ರಮಾಂಬೆ, ಭಗಿನೀ ನಿವೇದಿತಾ, ಶ್ರೀಮಾತೆ ಸಾರದಾದೇವಿ ಈ ಎಲ್ಲ ಮಾತೃದೇವತೆಯರು ಪ್ರಣಮ್ಯರು.
ಪೌರಾಣಿಕ ಮಹಾಪುರುಷರು (೧೨-೧೪)
ಶ್ರೀರಾಮ, ಭರತ, ಕೃಷ್ಣ, ಭೀಷ್ಮ, ಧರ್ಮರಾಯ, ಅರ್ಜುನ, ಮಾರ್ಕಂಡೇಯ, ಹರಿಶ್ಚಂದ್ರ, ಪ್ರಹ್ಲಾದ, ನಾರದ, ಧ್ರುವ;ಹನುಮಂತ, ರಾಜರ್ಷಿ ಜನಕ, ವ್ಯಾಸ, ವಸಿಷ್ಠ, ಶುಕ ಮಹರ್ಷಿ, ಬಲಿ, ದಧೀಚಿ, ವಿಶ್ವಕರ್ಮಾ, ಪೃಥು ಮಹಾರಾಜ, ವಾಲ್ಮೀಕಿ, ಪರಶುರಾಮ (ಭಾರ್ಗವ);
ಭಗೀರಥ, ಏಕಲವ್ಯ, ಮನು, ಧನ್ವಂತರಿ, ಶಿಬಿ, ರಂತಿದೇವ ಇವರೆಲ್ಲರೂ ಪುರಾಣ ಪ್ರಸಿದ್ಧರಾದವರು.
ಸಂತರು, ಮಹಾತ್ಮರು, ಮತಾಚಾರ್ಯರು (೧೫-೧೯)
ಬುದ್ಧರು, ತೀರ್ಥಂಕರ ಜಿನೇಂದ್ರರು, ಗೋರಖನಾಥ, ಪಾಣಿನಿ, ಪತಂಜಲಿ, ಶಂಕರಾಚಾರ್ಯರು, ಮಧ್ವಾಚಾರ್ಯರು, ನಿಂಬಾರ್ಕಮುನಿಗಳು, ರಾಮಾನುಜಾಚಾರ್ಯರು, ವಲ್ಲಭಾಚಾರ್ಯರು;ಝೂಲೇಲಾಲ, ಶ್ರೀಕೃಷ್ಣಚೈತನ್ಯ, ತಿರುವಳ್ಳುವರ್, ಶೈವಸಂತರಾದ ನಾಯನ್ಮಾರರು, ವೈಷ್ಣವಸಂತರಾದ ಆಳ್ವಾರರು, ಕಂಬ, ಬಸವೇಶ್ವರರು;
ದೇವಲ, ರವಿದಾಸ, ಕಬೀರ, ಗುರುನಾನಕ್, ಭಕ್ತ ನರಸೀಮೆಹತಾ, ತುಲಸೀದಾಸ, ದೃಢವ್ರತನಾದ ಗುರು ಗೋವಿಂದಸಿಂಗ್ (ದಶಮೇಶ);
ಶಂಕರದೇವ, ಜಗದ್ಗುರುಗಳಾದ ಸಾಯಣ-ಮಾಧವರು, ಸಂತ ಜ್ಞಾನೇಶ್ವರ, ಸಂತ ತುಕರಾಮ, ಸಮರ್ಥ ರಾಮದಾಸರು ಮತ್ತು ಸಿಖ್ಖರ ನಾಲ್ಕನೆಯ ಗುರು ರಾಮದಾಸರು, ಪುರಂದರದಾಸರು;
ಬಿರಸಾ, ಸಹಜಾನಂದ, ರಾಮಾನಂದ ಮುಂತಾದ ಮಹಾತ್ಮರು ಸದಾ ದೈವೀ ಸದ್ಗುಣಸಂಪತ್ತನ್ನು ಕರುಣಿಸಲಿ.
ಸಾಹಿತ್ಯ ಸಂಗೀತ ಕಲೆಗಳ ಉಪಾಸಕರು (೨೦-೨೧)
ಭರತಮುನಿ, ಕಾಳಿದಾಸ, ಶ್ರೀ ಭೋಜದೇವ, ಜಕಣಾಚಾರ್ಯ, ಸೂರದಾಸ, ತ್ಯಾಗರಾಜ, ಸತ್ಕವಿಯಾದ ರಸಖಾನ;ರವಿವರ್ಮಾ, ಭಾತಖಂಡೇ, ಭೂಪತಿಯಾದ ಭಾಗ್ಯಚಂದ್ರ ಮುಂತಾದ ವಿಖ್ಯಾತ ಕಲಾವಂತರು ನಿರಂತರವಾಗಿ ಸ್ಮರಣೀಯರು.
ಪ್ರಖ್ಯಾತ ವೀರರು (೨೨-೨೫)
ಅಗಸ್ತ್ಯ, ಕಂಬು, ಕೌಂಡಿನ್ಯ, ರಾಜೇಂದ್ರಚೋಳ, ಅಶೋಕ, ಪುಷ್ಯಮಿತ್ರ, ಉತ್ತಮ ನೀತಿವಂತನಾದ ಖಾರವೇಲ;ಚಾಣಕ್ಯ, ಚಂದ್ರಗುಪ್ತ, ವಿಕ್ರಮಾದಿತ್ಯ, ಶಾಲಿವಾಹನ, ಸಮುದ್ರಗುಪ್ತ, ಶ್ರೀಹರ್ಷ, ಶೈಲೇಂದ್ರ, ಬಪ್ಪರಾವಲ;
ಲಾಚಿತ್, ಭಾಸ್ಕರವರ್ಮಾ, ಹೂಣರನ್ನು ಗೆದ್ದ ಯಶೋಧರ್ಮಾ, ಶ್ರೀಕೃಷ್ಣದೇವರಾಯ, ಬಲಿಷ್ಠನಾದ ಲಲಿತಾದಿತ್ಯ;
ಮುಸುನೂರಿ ನಾಯಕರು, ಮಹಾರಾಣಾ ಪ್ರತಾಪಸಿಂಹ, ಛತ್ರಪತಿ ಶಿವಾಜಿ, ರಣಜಿತಸಿಂಹ ಇವರೆಲ್ಲ ಪರಾಕ್ರಮದಿಂದ ಹೆಸರುವಾಸಿಯಾದ ವೀರರು.
ವಿಜ್ಞಾನಿಗಳು (೨೬-೨೭)
ಕಪಿಲ, ಕಣಾದ, ಸುಶ್ರುತ, ಚರಕ, ಭಾಸ್ಕರಾಚಾರ್ಯ, ಪ್ರಾಜ್ಞನಾದ ವರಾಹಮಿಹಿರ;ನಾಗಾರ್ಜುನ, ಭರದ್ವಾಜ, ಆರ್ಯಭಟ, ಜಗದೀಶ ಚಂದ್ರಬೋಸ್, ವೆಂಕಟರಾಮನ್, ಶ್ರೀನಿವಾಸ ರಾಮಾನುಜನ್ ಮುಂತಾದ ವೈಜ್ಞಾನಿಕರೆಲ್ಲ ಸ್ಮರಣಾರ್ಹರು.
ಆಧುನಿಕ ಮಹಾಪುರುಷರು (೨೮-೩೧)
ರಾಮಕೃಷ್ಣ ಪರಮಹಂಸರು, ದಯಾನಂದ ಸರಸ್ವತಿ, ರವೀಂದ್ರನಾಥ ಠಾಗೋರರು, ರಾಜಾರಾಮ ಮೋಹನರಾಯ್, ಸ್ವಾಮಿ ರಾಮತೀರ್ಥರು, ಯೋಗಿ ಅರವಿಂದರು, ಪರಮ ಯಶೋವಂತ ವಿವೇಕಾನಂದರು;ದಾದಾಭಾಯಿ ನವರೋಜಿ, ಗೋಪಬಂಧು, ಲೋಕಮಾನ್ಯ ತಿಲಕರು, ಮಹಾತ್ಮಾ ಗಾಂಧೀ ಮುಂತಾದ ಮಹನೀಯರು, ರಮಣ ಮಹರ್ಷಿಗಳು, ಮದನಮೋಹನ ಮಾಲವೀಯರು, ಶ್ರೀ ಸುಬ್ರಹ್ಮಣ್ಯ ಭಾರತಿಯವರೂ;
ಸುಭಾಷ್‍ಚಂದ್ರ ಬೋಸರು, ಪ್ರಣವಾನಂದರು, ಕ್ರಾಂತಿವೀರ ವಿನಾಯಕ ಸಾವರ್ಕರ, ಠಕ್ಕರ್ ಬಾಪಾ, ಬಾಬಾಸಾಹೇಬ ಅಂಬೇಡ್ಕರ್, ಜ್ಯೋತಿಬಾ ಫುಲೇ, ನಾರಾಯಣ ಗುರುಗಳು;
ಸಂಘಶಕ್ತಿಯ ನಿರ್ಮಾಣಶಿಲ್ಪಿಗಳಾದ ಕೇಶವರಾವ್ ಹೆಡಗೆವಾರ್ ಮತ್ತು ಗುರೂಜೀ ಗೋಳವಲ್ಕರ್ ಇವರುಗಳು ನಿತ್ಯಸ್ಮರಣೆಯಿಂದ ನವಚೈತನ್ಯದಾಯಕರಾಗಿರುತ್ತಾರೆ.
ಉಲ್ಲೇಖಿತರಾಗದಿರುವ ಎಲ್ಲ ಮಹಾಪುರುಷರು (೩೨)
ಇವೆರಲ್ಲರಂತೆ ಯಾವ ಯಾವ ಭಕ್ತರ ಹೃದಯಗಳು ಸದಾ ಪ್ರಭುಚರಣ ಸ್ಮರಣೆಯಲ್ಲಿಯೇ ತತ್ಪರವಾಗಿದ್ದು ಇಲ್ಲಿ ಅವರ ಉಲ್ಲೇಖವಿಲ್ಲವೋ, ಯಾವ ಯಾವ ವೀರರು ಯುದ್ಧರಂಗದಲ್ಲಿ ಶತ್ರುಗಳನ್ನು ದ್ವಂಸಗೊಳಿಸಿದ್ದರೂ ಜಗತ್ತಿಗೆ ಅಜ್ಞಾತರಾಗಿ ಉಳಿದಿರುವರೋ, ಸಮಾಜೋದ್ಧಾರಕರೂ, ಹಿತಕಾರಿಯಾದ ವಿಜ್ಞಾನದಲ್ಲಿ ನಿಪುಣರೂ ಆಗಿದ್ದರೋ ಅವರೆಲ್ಲರಿಗೂ ಪ್ರತಿದಿನ ಅನೇಕಾನೇಕ ನಮನಗಳು.
ಫಲಶ್ರುತಿ (೩೩)
ಈ ಏಕಾತ್ಮತಾ ಸ್ತೋತ್ರವನ್ನು ಯಾರು ಶ್ರದ್ಧೆಯಿಂದ ನಿತ್ಯವೂ ಪಠಿಸುತ್ತಾರೋ ಅವರು ರಾಷ್ಟ್ರಧರ್ಮಗಳಲ್ಲಿ ನಿಷ್ಠಾವಂತರಾಗಿದ್ದು ಅಖಂಡಭಾರತವನ್ನು ಸ್ಮರಿಸಿದವರಾಗುತ್ತಾರೆ.
ಭಾರತಮಾತೆಗೆ ಜಯವಾಗಲಿ